ಮಳೆಗಾಲ ಕಠಿಣ, ಚಳಿಗಾಲ ರಮಣೀಯ, ಬೇಸಿಗೆ ಚಾರಣಕ್ಕೆ ಮಾತ್ರ …..

ಮಳೆಗಾಲ ಕಠಿಣ, ಚಳಿಗಾಲ ರಮಣೀಯ, ಬೇಸಿಗೆ ಚಾರಣಕ್ಕೆ ಮಾತ್ರ ಕೊಡಚಾದ್ರಿ…..

FB_IMG_1511340006216-01

ಕೊಡಚಾದ್ರಿ ಶಿವಮೊಗ್ಗದ ಹೊಸನಗರದಂಜಿನ ರಮಣೀಯ ಬೆಟ್ಟ, ಶರಾವತಿ ಕಣಿವೆಯ ಆಚೀಚೆ ಅಮೋಘವಾದ ಬೆಟ್ಟದ ಸಾಲುಗಳಿವೆ. ಅದರಲ್ಲಿ ಕೊಡಚಾದ್ರಿ ಕೂಡ ಒಂದು. ಸಾಮಾನ್ಯವಾಗಿ ಪ್ರವಾಸಿತಾಣಗಳನ್ನ ವೃತ್ತಿಪರತೆ ಇಲ್ಲದ ವೆಬ್‍ಸೈಟ್‍ಗಳಲ್ಲಿ ಸರ್ಚ್ ಮಾಡುವಾಗ ಕೊಡಚಾದ್ರಿಯ ಅಧ್ಭುತ ಫೋಟೋಗಳನ್ನ ನೋಡಿ ಕೊಡಚಾದ್ರಿ ಏರಲು ಬಂದು ಬಿಡುತ್ತಾರೆ. ಅದರಲ್ಲೂ ಭಗವಾನ್ ಶಂಕರಾಚಾರ್ಯರು ತಪಸ್ಸು ಮಾಡಿದ್ದಾರೆ ಎನ್ನಲಾದ ಸರ್ವಜ್ಞ ಪೀಠವನ್ನ ನೋಡಲು ವಯಸ್ಕರು ಬಂದು ನಿತ್ರಾಣದಿಂದ ಕುಸಿದು ಬಿದ್ದವರಿದ್ದಾರೆ. ಅದರಲ್ಲೂ ಬೇಸಿಗೆಯಲ್ಲೇನಾದರೂ ಬಂದರೆ ದೇವರೇ ಕಾಪಾಡಬೇಕು..

ನಾಗರಾಜ್ ಶಣೈ ಎಂಬುವವರು ಕಳೆದ ವಾರ ಕೊಡಚಾದ್ರಿಗೆ ಹೋದ ಅನುಭವ ಹೇಳುತ್ತಿದ್ದರು, ಮೋಡಗಳೆಲ್ಲಾ ನೆತ್ತಿ ಮೇಲೆ ಓಡುತ್ತಿರುತ್ತವೆ, ಹೋಗಿ ಬನ್ನಿ ಎಂದು ಯಾರೋ ಹೇಳಿದ್ದರಂತೆ, ಅದಕ್ಕವರು ಕುಟುಂಬ ಸಮೇತರಾಗಿ ಇಲ್ಲಿಗೆ ಬಂದಿದ್ದಾರೆ. ಇಲ್ಲಿನ ಬೆಟ್ಟ ಏರುವುದಕ್ಕೆ ಅದೇ ಧನದಾಹಿ ಜೀಪ್‍ಗಳನ್ನ ಸಾವಿರಾರು ರುಪಾಯಿ ಕೊಟ್ಟು ಬುಕ್ ಮಾಡಿಕೊಂಡು ಮೇಲೆ ಹೋದರೆ ಕಂಡದ್ದು ಏರಿಳಿತಗಳಿರುವ ಬೆಟ್ಟಗಳ ಸಾಲು ಮಾತ್ರ..!

ಇನ್ನು ಸರ್ವಜ್ಞ ಮಂಟಪದೆಡೆಗೆ ಹೋಗುವಷ್ಟರಲ್ಲಿ ಇವರ ಜೊತೆ ಬಂದಿದ್ದ ವಯಸ್ಕರರು ಕುಸಿದು ಬಿದ್ದರಂತೆ. ಇದು ಶೆಣೈ ಅವರಿಗಷ್ಟೇ ಆದ ಅನುಭವವಲ್ಲ, ಹೀಗೆ ಸಾವಿರಾರು ಪ್ರವಾಸಿಗರು ಬೇಸಿಗೆಯಲ್ಲಿ ಬಂದು ಕುಸಿದು ಬೀಳುತ್ತಾರೆ.

DSCN5871

ಈ ಬೆಟ್ಟಕ್ಕೆ ಬೇಸಿಗೆಯಲ್ಲಿ ಬೈಕ್ ರೈಡ್ ಮಾಡಬಹುದು. ಆದರೆ ಬೈಕರ್‍ಗಳಿಗಿಂತಾ, ಬೈಕ್ ಎಂಜಿನ್ ಸಾಮಥ್ರ್ಯ ಹಾಗೂ ಆಫ್‍ರೋಡ್ ವಿನ್ಯಾಸ ಇರಬೇಕು. ಹಾಗಾದರೆ ಇದು ಪ್ರವಾಸಕ್ಕೆ ಯೋಗ್ಯವಲ್ಲವೇ ಎಂಬ ಪ್ರಶ್ನೆಗೆ ಕಾಲ ನೋಡಿ ಉತ್ತರ ಹೇಳಬೇಕಾಗುತ್ತದೆ. ಬೇಸಿಗೆಯಲ್ಲಿ ಮಲೆನಾಡಿನೊಳಗೆ ಸುತ್ತಲು ಸಾಧ್ಯವಿಲ್ಲ, ಕೊಡಚಾದ್ರಿ ಮಳೆಗಾಲದಲ್ಲಿ ಹೋಗುವುದು ಸಾಹಸದ ಕೆಲಸ, ಚಳಿಗಾಲದಲ್ಲಿ ಇದೊಂದು ರಮಣೀಯ ಪ್ರದೇಶ, ಜನವರಿಯಿಂದ ಮೇ ತಿಂಗಳವರೆಗೆ ಕೇವಲ ಚಾರಣ್ಯಯೋಗ್ಯ ಸ್ಥಳ.

ಟ್ರಿಪ್‍ಅಡ್ವೈಸರ್ ಥರಹದ ವೆಬ್‍ಸೈಟ್ ನೋಡಿ ಬೇಸರದಿಂದ ವಾಪಸ್ ಆಗುವುದಕ್ಕಿಂತ ಮಲೆನಾಡಿಗಾಗಿಯೇ ಇರುವ ನಮ್ಮ ವೆಬ್‍ಸೈಟ್ ಮಲೆನಾಡು ಟೂರಿಸಂ ನೋಡಿ ಪ್ರವಾಸಕ್ಕೆ ಪ್ಲಾನ್ ಮಾಡಿ……

KODACHADRI IS A SEASONAL, THIS IS GREEN PARADISE DURING MONSOON AND WINTER, DURING SUMMER THIS IS A PERFECT PLACE FOR TREKKING ENTHUSIASTS

 

ನಿಮ್ಮ ಟಿಪ್ಪಣಿ ಬರೆಯಿರಿ