ತೀರ್ಥಹಳ್ಳಿ ಚಿತ್ರಣವನ್ನೇ ಬದಲಿಸಿದ ವಿಶ್ವಶ್ರೇಷ್ಟ ಸುಂದರ ಚತುಷ್ಪಥ ರಸ್ತೆ

WhatsApp Image 2017-10-30 at 2.12.41 PM

ತೀರ್ಥಹಳ್ಳಿ ಸಿಟಿ ಎಂದರೆ ಕೆಸರು ಗುಂಡಿಗಳ ಡಾಂಬಾರು ರಸ್ತೆಯಲ್ಲ ಈಗ ಅದು ವಿಶ್ವಶ್ರೇಷ್ಟ ಚತುಷ್ಪಥ ರಸ್ತೆ. ಬಹುನಿರೀಕ್ಷಿತ ತೀರ್ಥಹಳ್ಳಿ ಚತುಷ್ಪದ ಕಾಂಕ್ರಿಟ್ ರಸ್ತೆ (ಆಜಾದ್ ರಸ್ತೆ ) ಉದ್ಘಾಟನೆಗೊಂಡಿದೆ. ನಗರದ ಇಡೀ ಚಿತ್ರಣವನ್ನೇ ಬದಲಿಸಿದ ಈ ರಸ್ತೆಯಲ್ಲೊಮ್ಮೆ ನಿಂತರೆ ಅರೇ ಇದು ನಮ್ಮ ತೀರ್ಥಹಳ್ಳೀನಾ ಎಂದು ಗೊಂದಲ ಉಂಟಾಗುತ್ತದೆ. ತುಂತುರು ಮಳೆಯಲ್ಲಂತೂ ಊಟಿ ಹೆದ್ದಾರಿಯಂತೆ ಕಂಗೊಳಿಸುತ್ತದೆ. WhatsApp Image 2017-10-30 at 2.14.05 PMಸುಮಾರು 27.32 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ 9.60 ಕಿಮೀ ಉದ್ದದ ಕಾಂಕ್ರೀಟ್ ರಸ್ತೆ ರಾಜ್ಯದಲ್ಲಿ ಮಾದರಿ ಕಾಮಗಾರಿ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ನಗರದ ಆಗುಂಬೆ ವೃತ್ತದಲ್ಲಿ ನಿರ್ಮಿಸಿರುವ ಪ್ರಯಾಣಿಕರ ತಂಗುದಾಣ ಮನಮೋಹಕವಾಗಿದೆ. ಅಲ್ಲೇ ಪಕ್ಕದಲ್ಲಿ ಕಿರು ಉದ್ಯಾನವನ ಆಕರ್ಷಣೀಯವಾಗಿದೆ. ರಾಷ್ಟ್ರೀಯ ಹೆದ್ದಾರಿಯಾಗಿರುವ ಈ ಮಾರ್ಗದಲ್ಲಿ ಕುವೆಂಪು ವೃತ್ತದಿಂದ ದೊಡ್ಡಮನೆಕೇರಿವರೆಗಿನ ಡಿವೈಡರ್ ಹಸಿರಿನಿಂದ ಕಂಗೊಳಿಸುತ್ತಿದೆ. ಈ ರಸ್ತೆ ವಿನ್ಯಾಸ ಆಧುನಿಕತೆಯಿಂದ ಕೂಡಿದ್ದು ತೀರ್ಥಹಳ್ಳಿ ಪಟ್ಟಣದಲ್ಲಿ ಮೂರು ದಿನ ನಿರಂತರವಾಗಿ ಮಳೆಯಾದರೂ ನೀರು ನಿಲ್ಲೋದಿಲ್ಲ ಎಂದು ಹೇಳಲಾಗುತ್ತಿದೆ. ಇನ್ನುಳಿದಂತೆ ಸೂಚನಾಫಲಕಗಳು, ಮಾಹಿತಿ ಫಲಕಗಳು, ಬೋಲಾರ್ಡ್‍ಗಳು, ವಿದ್ಯುತ್‍ದೀಪಗಳು, ರಸ್ತೆ ಮಾರ್ಕಿಗ್ ಹಾಗೂ ಬ್ಲಿಂಕಿಂಗ್ ಲೈಟ್‍ಗಳು ವ್ವವಸ್ಥಿತವಾಗಿ ಮಾಡಲಾಗಿದೆ.

NEWS EDITION  : MALNADTOURISM.COM

#THEERTHAHALLI, #MALNADTOURISM, #MTRIDERSCLUB

 

Advertisements

ಹಿಡ್ಲುಮನೆ ಎಂದರೆ ಜಲಪಾತಗಳಿಗೆ ಸಮನಾಂತರವಾದ ಚಾರಣ Hidlumane is a beautiful series of water falls near kodachadri

ಮಲೆನಾಡಿನ ಮಳೆಯನ್ನು ನಿರ್ಧರಿಸಲು ಸಾಧ್ಯವಿಲ್ಲ, ಒಮ್ಮೆಲೆ ಮೋಡ ಕವಿದು ಪ್ರಳಯವಾಗುತ್ತೇನೋ ಎಂಬ ವಾತಾವರಣ, ಮರುಕ್ಷಣ ಎಳೆ ಬಿಸಿಲು ಚಾಚಿ ಒದ್ದೆ ರಸ್ತೆಯ ಮೇಲೆ ಹವೆ, ಅರ್ಧ ಕಿಲೋಮೀಟರ್ ಅಂತರದಲ್ಲಿ ಮಳೆ-ಬಿಸಿಲಿನ ಕಣ್ಣಾಮುಚ್ಚಾಲೆ.DSCN9761

ಹಿಡ್ಲುಮನೆ ಜಲಪಾತವೆಂದರೆ ಅದು ಬರೀ ಜಲಪಾತವಲ್ಲ, ಪದಗಳಲ್ಲಿ ಬಣ್ಣಿಸಲೂ ಸಾಧ್ಯವಿಲ್ಲ, ಇಂಬಳದ ನಾಡು ಹೊಸನಗರದ ನಿಟ್ಟೂರಿನ ಸಮೀಪದಲ್ಲಿರುವ ಹಿಡ್ಲುಮನೆ ಜಲಪಾತ ಕೊಡಚಾದ್ರಿಯ ಅಭಿಮುಖ. ಸೋಮಾರಿ ಬೈಕ್ ರೈಡರ್‍ನ ಯೋಜನೆ ಇಲ್ಲದ ಪ್ರವಾಸವಾದ್ದರಿಂದ ಬೆಳಕು ಹರಿಯುವವರೆಗೂ ಸುತ್ತಿಕೊಂಡು ಮಲಗಿದ್ದೆ. ಅಂದು ಸೂರ್ಯನಿಗೆ ಮುಂಜಾನೆಯೇ ಗ್ರಹಣ ಬಡಿದಂತಾಗಿತ್ತು. ಹಾಗಾಗಿ ಹೊಸನಗರದ ನನ್ನ ಕಿರಿಯ ಸ್ನೇಹಿತ ಫೋನ್ ಮಾಡಿ ಅಂದೇ ಬರಲು ಹೇಳಿದ. ಒಂಭತ್ತು ಗಂಟೆ ಸುಮಾರಿಗೆ ಶಿವಮೊಗ್ಗದಿಂದ ಹೊಸನಗರಕ್ಕೆ ಹೊರಟು ರಿಪ್ಪನ್ ಪೇಟೆಯವರೆಗೆ ಬಂದಾಗ ಒಣಹವೆಯ ಬಿಸಿ ಕಿರಿಕಿರಿ ಮಾಡುತ್ತಿತ್ತು. ಮುಂದೆ ಐದಾರು ಕಿಲೋಮೀಟರ್ ದೂರ ಕ್ರಮಿಸಿ ಕೋಡೂರಿಗೆ ಬಂದಾಗ ಚಳಿಗಾಳಿ ಮೈ ನಡುಕ ಹೆಚ್ಚಿಸಿತು. ಕೋಡೂರು ದಾಟುವ ವೇಳೆಗೆ ನಿಧಾನವಾಗಿ ಮಳೆಯ ಹನಿಗಳು ಮುತ್ತಿಕ್ಕುತ್ತಿದ್ದವು, ಹೊಸನಗರ ಕೊಡಚಾದ್ರಿ ಕಾಲೇಜು ಸಮೀಪಿಸುತ್ತಿದ್ದಂತೆ ಕುಕ್ಕುತ್ತಿದ್ದವು.

ಹೊಸನಗರದಲ್ಲಿ ತಿಂಡಿ ಮುಗಿಸಿಕೊಂಡು 11 ಗಂಟೆಗೆ ನಿಟ್ಟೂರು ಕಡೆ ಬೈಕ್ ಹೊರಟಿತು. ಜಯನಗರದಲ್ಲಿ ತಿರುವಿಕೊಂಡು ಬೆಕ್ಕೋಡಿ ಮೇಲೆ ಹೋಗಲು ಪ್ರಯತ್ನಿಸಿ ವಿಫಲವಾದ್ವಿ. ಬೆಕ್ಕೋಡಿ ಲಾಂಚ್ ಕೆಟ್ಟು ನಿಂತಿತ್ತು. ನಂತರ ನಗರ-ಸಂಪೇಕಟ್ಟೆ ಮೇಲೆ ನಿಟ್ಟೂರು ಬಂದು ತಲುಪಿದಾಗ ಮಳೆಯ ಹನಿಗೆ ಮೈ ಒದ್ದೆಯಾಗಿತ್ತು. ಆಗಲೇ 2 ಗಂಟೆಯಾಗಿದ್ದರಿಂದ ಅಲ್ಲೇ ಚಿತ್ರಾನ್ನ ಕಟ್ಟಿಸಿಕೊಂಡು ಒಳಹಾದಿ ಹಿಡಿದು ಹೊರಾಟಾಗ ಕವಲು ದಾರಿಗಳದ್ದೇ ಕಾರುಬಾರು. ಅಯ್ಯೊ ಇಲ್ಲಿ ಒಂದು ಬೋಡ್ ಆದರೂ ಸಿಕ್ಕಿಸಿದ್ದರೆ ಎಷ್ಟು ಉಪಯೋಗವಾಗುತ್ತಿತ್ತು ಎಂದು ಪ್ರವಾಸೋದ್ಯಮ ಇಲಾಖೆಯನ್ನು ಶಪಿಸಿ ಮುಂದೆ ಸಾಗುತ್ತಿದ್ದಂತೆ ಬೈಕ್ ಟಯರ್ ಜಾರುತ್ತಾ ಅಪಾಯದ ಮುನ್ಸೂಚನೆ ನೀಡುತ್ತಿತ್ತು. ಕವಲು ದಾರಿಯಲ್ಲಿ ಹಿಂದೆ ಮುಂದೆ ಸಾಗಿಕೊಂಡು ಹೊರಟಾಗ ಬೆಟ್ಟದ ತಪ್ಪಲಿನ ಹುಲ್ಲುಗಾವಲಿನ ಮಧ್ಯೆಯೊಂದು ಮನೆ, ಅಲ್ಲಿಂದ ನಡೆದುಕೊಂಡು ಬಂದಾತ ನಮಗೆ ಗೈಡ್ ಆದ ವ್ಯಕ್ತಿಯೊಬ್ಬ ಒಂದಿಪ್ಪತ್ತು ರೂಪಾಯಿ ಇದ್ದರೆ ಕೊಡಿ ಎಂದು ಕೇಳಿದ. ಆ ಕೊಪ್ಪೆಧಾರಿ ವಯಸ್ಕನ ಮುಗ್ಧತೆ ಹಾಗೂ ಅವನು ತೋರಿದ ಹಾದಿ ಎರಡೂ ಕಿಲೋಮೀಟರ್ ಅಂತರದ ಮನೆಯ ಬಳಿ ತಂದು ಬಿಟ್ಟಿತು. ಡೆಡ್ ಎಂಡ್‍ಗೆ ಬಂದುಬಿಟ್ಟಿವಲ್ಲ ಎಂಬ ಅನುಮಾನದಿಂದ ಆ ಮನೆಯ ಅಂಗಳಕ್ಕೆ ಕಾಲಿಟ್ಟಾಗ ಅಲ್ಲೊಬ್ಬ ಅರಣ್ಯ ಇಲಾಖೆ ಸಿಬ್ಬಂದಿ ಕೂತುಕೊಂಡು ಚೀಟಿ ಹರಿಯುತ್ತಿದ್ದ. 50 ರೂಪಾಯಿ ಶುಲ್ಕದೊಂದಿಗೆ ಮನೆಹಿಂದಿನ ದಾರಿ ಹಿಡಿದು ಭೋರ್ಗರೆವ ನೀರ ದನಿಯತ್ತ ಹೊರಟೆವು. ಹಿತ್ತಲು, ಗದ್ದೆ, ಬಾಳೆಗಿಡದ ಬುಡದಲ್ಲಿ ಹಾರುತ್ತಿದ್ದ ನೀರು, ಜಿಟಿ ಜಿಟಿ ಮಳೆಗೆ ಜಾಕೆಟ್‍ನಿಂದ ನೀರು ಜಿನುಗುತ್ತಿತ್ತು. ನೀರಿನ ಸವಳಿನಲ್ಲಿ ಕಾಲು ಜಾಡಿಸುತ್ತಾ ಸುತ್ತಲಿನ ದಟ್ಟ ಕಾಡಿನೊಳಗೆ ನುಗ್ಗಿದಾಗ ಎಲ್ಲೋ ಧುಮ್ಮಿಕ್ಕುವ ನೀರಿನ ಶಬ್ದ ಕಿವಿಗೆ ಬಡಿಯಿತು. ಮಸುಕಾಗಿ ಎಲೆಮರೆಯಲ್ಲಿ ಕಂಡ ಜಲಪಾತ ಕಣ್ಮನ ಸೆಳೆಯುವುದಷ್ಟೇ ಅಲ್ಲ ನಮ್ಮನ್ನು ಹತ್ತಿರಕ್ಕೆ ಸೆಳೆದುಕೊಂಡು ಹೋಯ್ತು..!DSCN9720

ಅಷ್ಟರಲ್ಲಿ ಯಾರೋ ಪ್ರವಾಸಿಗ ಯುವಕರು ಮೈಯೊಡ್ಡಿ ಸ್ನಾನ ಮಾಡುತ್ತಿರುವುದು ಕಂಡಿತು. ನೀರಿನ ರಭಸದಲ್ಲಿ ಜಾರುವ ಚೂಪಾದ ಬಂಡೆಗಳಲ್ಲಿ ಹೆಜ್ಜೆ ಹಾಕುತ್ತಾ ಸಮೀಪಿಸಿದಾಗ ಅದೇ ಜಲಪಾತವಿರಬೇಕು ಎನಿಸಿ ಅಲ್ಲೇ ಲಘು ಉಪಹಾರ ಮಾಡಿದೆವು. ಅಷ್ಟರಲ್ಲಿ ಒಂದಿಷ್ಟು ಹುಡುಗಿಯರು ಹಾಗೂ ಅಂಟಿಕೊಂಡಿದ್ದ ಯುವಕರು ಮೇಲಿಂದ ಗಿಡಗಳನ್ನು ಬಳಸಿ ಇಳಿಯುತ್ತಿದ್ದರು ಆಗಲೇ ಗೊತ್ತಾಗಿದ್ದು ನಾವಿದ್ದಿದ್ದು ಪಾದದಲ್ಲಿ..! ಮಳೆ ಅಂದೇ ಹೆಚ್ಚಾದಂತಿತ್ತು, ದಬಣದಂತೆ ಕುಕ್ಕುತ್ತಿತ್ತು ನಮ್ಮಲ್ಲಿದ್ದ ಡಿಎಸ್‍ಎಲ್‍ಆರ್ ಹಾಗೂ ಕೂಲ್‍ಪಿಕ್ ಕ್ಯಾಮೆರಾಗಳನ್ನು ಬೆಚ್ಚಗಿಡುವ ಬರದಲ್ಲಿ ಫೋಟೋ ತೆಗೆಯೋದನ್ನ ಮರೆತೇ ಬಿಟ್ಟೆವು.DSCN9757

ಮರದ ಬುಡ ಹಿಡಿದು, ಟೊಂಗೆಗಳನ್ನ ಬಗ್ಗಿಸಿ, ಗಿಡಗಳನ್ನು ಸರಿಸಿಕೊಂಡು ಹೋಗುತ್ತಿದ್ದರೆ ಪಕ್ಕದಲ್ಲೇ ಒಂದರ ಮೇಲೊಂದು ಜಲಪಾತಗಳ ದರ್ಶನವಾಗುತ್ತಿತ್ತು. ಜಲಪಾತಕ್ಕೆ ಸಮಾನಾಂತರವಾಗಿ ಸಾಗುವ ಚಾರಣ ಅಧ್ಭುತ ಅನುಭವ ಕಟ್ಟಿಕೊಟ್ಟಿತು. ನಮ್ಮ ನಡೆ ಮೂಲ ಜಲಪಾತದೆಡೆಯಾದ್ದರಿಂದ ಸುತ್ತಲೂ ಹೊದ್ದ ಹಸಿರಿನ ಸಿರಿಯತ್ತ ಕಣ್ಣು ಹೊರಳಲಿಲ್ಲ. ಸಿನಿಮಾಗಳ ಸೆಟ್‍ನಲ್ಲಿ ಕಾಣುವ ವೈಭವದ ಜಲಧಾರೆ ಕಣ್ಮಂದೆ, ಆದರೆ ಹತ್ತಿರ ಹೋಗಲು ಆಗದಷ್ಟು ಮಳೆ ಹಾಗೂ ನೀರಿನ ರಭಸ. ಅಲ್ಲಿಂದ ಸೋಕುತ್ತಿದ್ದ ತೇವ ಗಾಳಿಗೇ ಮೈ ಕೊಡಲಾಗುತ್ತಿರಲಿಲ್ಲ. ಒಟ್ಟಿನಲ್ಲಿ ಮಳೆಯ ಕಾರಣದಿಂದ ಜಲಪಾತದ ನೀರಿಗೆ ಮೈ ಕೊಟ್ಟು ಸ್ನಾನ ಮಾಡಬೇಕೆಂದಿದ್ದ ಬಯಕೆ ನೀರಿನಂತೆ ಹರಿದು ಹೋಯ್ತು..!

ಪ್ರವಾಸಿಗರ ಗಮನಕ್ಕೆ

ಈ ಜಲಪಾತ ಹೊಸನಗರದ ನಿಟ್ಟೂರು ಸಮೀಪ ಇದೆ, ಕೇಳಿಕೊಂಡೇ ಸಾಗಬೇಕು. ಶಿವಮೊಗ್ಗದಿಂದ 130 ಕಿಲೋಮೀಟರ್, ಕೊಡಚಾದ್ರಿ ಹಾಗೂ ಕೊಲ್ಲೂರು ಹತ್ತಿರದ ಪ್ರವಾಸಿತಾಣಗಳು. ನಿಟ್ಟೂರಿನಿಂದ ಜೀಪ್ ಇದೆ. ಬೈಕರ್‍ಗಳು ಆರಾಮಾಗಿ ಸಾಗಬಹುದು, ನಿಟ್ಟೂರಿನಿಂದ ಚಾರಣದ ರೂಪದಲ್ಲಿ ಕೂಡ ಸಾಗಬಹುದು. ಮಳೆಗಾಲ ಹಾಗೂ ಚಳಿಗಾಲದ ಪ್ರವಾಸಿತಾಣ ಇದಾಗಿದ್ದು ಮಳೆಗಾಲದಲ್ಲಿ ರೇನ್‍ಕೋಟ್ ಹಾಗೂ ವಾಟರ್‍ಪ್ರೂಫ್ ಬ್ಯಾಗ್ ಕಡ್ಡಾಯ. ಒಂದು ಜೊತೆ ಒಳಉಡುಪು ಹಾಗೂ ಬಟ್ಟೆ ಇಟ್ಟುಕೊಂಡರೆ ನೀರಿನಲ್ಲಿ ಸ್ನಾನ ಹಾಗೂ ಈಜಾಡುವ ಮೂಲಕ ಇನ್ನಷ್ಟು ಎಂಜಾಯ್ ಮಾಡಬಹುದು. ಮಹಿಳೆಯರು ಚಾರಣಿಗರ ಔಟ್‍ಪಿಟ್ ಧರಿಸಿದರೆ ಉತ್ತಮ. ಕೆಲವೊಮ್ಮೆ ಇಂಬಳ ಹೆಚ್ಚಿರುವುದರಿಂದ ಅದಕ್ಕೆ ಶಾಟ್ರ್ಸ್‍ಗಳ ಬಳಕೆ ಉತ್ತಮ. ಶೂಗಳೂ ಗ್ರಿಪ್ ಇದ್ದರೆ ಜಾರು ಬಂಡೆಗಳ ಮೇಲೆ ಸರಾಗವಾಗಿ ಸಾಗಬಹುದು. ಉತ್ತಮ ಕ್ಯಾಮೆರಾಗಳನ್ನು ತೆಗೆದುಕೊಂಡು ಹೋದರೆ ಲೈಫ್‍ಟೈಂ ಫೋಟೋಗಳನ್ನ ತೆಗೆಯಬಹುದು. ನೋಡುವ ಕಾಲ ಜುಲೈನಿಂದ ಡಿಸೆಂಬರ್.

ವಿಶೇಷ ಸೂಚನೆ: ಬಾಟಲಿಪುತ್ರರ ಕಾಟ ಜಾಸ್ತಿಯಾಗಿರೋದ್ರಿಂದ ಗಾಜಿನ ಚೂರುಗಳು ನೀರಲ್ಲಿರುತ್ತವೆ.

AUTHOR: UDAYA SAGARA

SPONSORED: MALNADTOURISM.COM AND #MTRIDERSCLUB

ಅನಿಸಿಕೆ ಅಭಿಪ್ರಾಯಗಳನ್ನು ಹಂಚಿಕೊಳ್ಳಿ @TOURMALNAD@GMAIL.COM

FIND US : FACEBOOK,YOUTUBE

 

ಪರಮಾತ್ಮ ಸಿನಿಮಾ ಶೂಟಿಂಗ್ ಮಾಡಿದ ಸ್ಥಳ ಈಗ ಹೇಗಿದೆ ಗೊತ್ತಾ..?

ಶಿವಮೊಗ್ಗ: ಮಲೆನಾಡಿನಲ್ಲಿ ಈಗ ಎತ್ತ ನೋಡಿದರೂ ಬರಡು ಪ್ರದೇಶಗಳು, ಬೇಸಿಗೆಕಾಲದಲ್ಲಿ ನದಿ, ತೊರೆ, ಹಳ್ಳ, ಕೆರೆಗಳೆಲ್ಲಾ ಬತ್ತಿ ಹೋಗಿರುತ್ತವೆ. ಆದರೆ ವರಾಹಿ ಹಿನ್ನೀರು ಮಾತ್ರ ಸದಾ ಕಂಗೊಳಿಸುತ್ತಿರುತ್ತದೆ. ಹೊಸನಗರದ ಯಡೂರು ಹಾಗೂ ಮಾಸ್ತಿಕಟ್ಟೆ ಸುತ್ತಲ ಪ್ರದೇಶವನ್ನು ಸುಂದರ ಪರಿಸರವನ್ನಾಗಿ ಮಾಡಿರುವ ವರಾಹಿ ನೀರು ಪ್ರವಾಸಿಗರಿಂದ ದೂರ ಉಳಿದಿದೆ.

28smg10-3-2.jpg

ಜಲವಿದ್ಯುತ್ ಉದ್ದೇಶದಿಂದ 1983ರಲ್ಲಿ ಮಾಣಿ ಡ್ಯಾಂ ನಿರ್ಮಾಣ ಮಾಡಲಾಯಿತು. ಉಡುಪಿಯ ಹೊಸಂಗಡಿಯಲ್ಲಿ ವಿದ್ಯುತ್ ಸ್ಥಾವರವನ್ನು ನಿರ್ಮಾಣ ಮಾಡಲಾಗಿದೆ. ಅಣೆಕಟ್ಟಿನಲ್ಲಿ ನಿಲ್ಲಿಸಲಾದ ನೀರು ಸುತ್ತಲ ಪ್ರದೇಶವನ್ನ ಸುಂದರ ತಾಣಗಳನ್ನಾಗಿ ಮಾಡಿದೆ.  ಯಡೂರು ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಮುಳುಗಡೆಯಾದ ಮರಗಳ ಬೇರುಗಳು, ಪ್ರಾಣಿ ಪಕ್ಷಿಗಳ ಕಲಾಕೃತಿಗಳ ರೀತಿ ಕಾಣುತ್ತವೆ. ವನ್ಯಜೀವಿಗಳು ನೀರು ಕುಡಿಯಲೆಂದು ಹಿನ್ನೀರಿಗೆ ಬರುತ್ತವೆ

28SMG10 (2)

ಇನ್ನು  ಮಾಸ್ತಿಕಟ್ಟೆ ಸುತ್ತಲ ಪ್ರದೇಶ ಕೂಡ ವರಾಹಿ ಹಿನ್ನೀರಿನಿಂದ ಆವರಿಸಿದೆ. ಮಾಸ್ತಿಕಟ್ಟೆಯಿಂದ ಹುಲಿಕಲ್ ಮಾರ್ಗವಾಗಿ ಹೋಗುವಾಗ ವರಾಹಿ ಜಲಾಶಯದ ನೀರು ವಿಸ್ತಾರವಾದ ಪ್ರದೇಶಕ್ಕೆ ಚಾಚಿಕೊಂಡಿರುವ ಸ್ಥಳ ಸಿಗುತ್ತದೆ. ಅಲ್ಲೊಂದು ಮುಳುಗು ಸೇತುವೆಯಿದೆ. ಕನ್ನಡದ ಹಲವು ಸಿನಿಮಾಗಳನ್ನು ಇಲ್ಲಿ ಚಿತ್ರೀಕರಣ ಮಾಡಲಾಗಿದೆ. ಪರಮಾತ್ಮ ಸಿನಿಮಾದ ಹಲವು ದೃಶ್ಯಗಳನ್ನು ಇಲ್ಲೇ ಚಿತ್ರೀಕರಣಮಾಡಿದ್ದು. ಈ ಮುಳುಗು ಸೇತುವೆಯ ಒಂದು ವೈಶಿಷ್ಟ್ಯವೆಂದರೆ ಅಕ್ಟೋಬರ್ ತಿಂಗಳಲ್ಲಿ ಸೇತುವೆ ಪೂರ್ಣ ಪ್ರಮಾಣದಲ್ಲಿ ಗೋಚರಿಸುತ್ತದೆ. ಬೇಸಿಗೆಯಲ್ಲಿ ಜಲಾವೃತವಾಗಿರುತ್ತದೆ. ಬೇಸಿಗೆಯಲ್ಲಿ ಮಲೆನಾಡು ಪ್ರವಾಸ ಮಾಡುವವರಿಗೆ ಈ ಸ್ಥಳ ಮುದ ನೀಡಬಹುದು.

 

WIKI HINTS

Varahi River, also called Halady River, flows through Western Ghats in the Indian state of Karnataka. It joins the sea via Halady, Basrur, Kundapur and Gungulli. It joins with the Souparnika River, Kedaka River, Chakra River, and Kubja River and merges into the Arabian Sea. According to mythology, Varaha is one of the incarnations of Lord Vishnu. Varahi is feminine gender of Varaha.

 

TEAM MT@MALNADTOURISM.COM

This wood board and Ferryboat in your popular cinema..!

ಹೊಸನಗರದಿಂದ ಸಂಪೆಕಟ್ಟೆಗೆ ಜಲಮಾರ್ಗ…!

ನಗರ ಬಳಸದೇ ಸಂಪೇಕಟ್ಟೆ ನಿಟ್ಟೂರಿಗೆ ಹೋಗಬಹುದು..!
ಹೊಸನಗರದಿಂದ ಸಂಪೇಕಟ್ಟೆ, ಕೊಡಚಾದ್ರಿ ಹಾಗೂ ನಿಟ್ಟೂರಿಗೆ ಹೋಗಬೇಕಾದರೆ ನಗರ ಹೋಗಿ ಅಲ್ಲಿಂದ ಹೋಗಬೇಕಿತ್ತು. ನಗರ ಕೋಟೆ ಬಿಟ್ಟರೆ ಇನ್ನೇನು ಅಲ್ಲಿ ಸಿಗುವುದಿಲ್ಲ, ಆ ದಾರಿ ತುಂಬಾ ಸಮಯವನ್ನೂ ಕೂಡ ನುಂಗಿ ಹಾಕುತ್ತದೆ. ನೀರಿನ ಸೌಂದರ್ಯ ನೋಡಲು ಬಯಸುವವರು ಈಗ ಬೆಕ್ಕೋಡು ಸೇತುವೆಯ ಬಳಿಯ ಲಾಂಚ್ ಮೂಲಕ ನಿಟ್ಟೂರು ಹೋಗಬಹುದು. ಮಳಲಿಯಿಂದ ಹೆಬ್ಬುರಳಿ ಅಲ್ಲಿಂದ ಸಂಪೇಕಟ್ಟೆಗೆ ಹೋಗಬಹುದು. ತುಂಬಾ ಜನ ಯಾತ್ರಿಕರೂ ಕೂಡ ಕೊಲ್ಲೂರಿಗೆ ಹೋಗುವವರು ನಗರದಲ್ಲಿ ಗಿರಕಿ ಹೊಡೆದು ಬರುವುದನ್ನು ತಪ್ಪಿಸಿಕೊಳ್ಳಬಹುದು. ಕಾರ್‍ಗಳನ್ನು ಹೊತ್ತೊಯ್ಯುವ ಸಾಮಥ್ಯ ಈ ಲಾಂಚ್‍ಗೆ ಇದೆ. ಕೆಪಿಸಿಯವರು ನೀಡಿರುವ ಈ ಲಾಂಚ್ ಸದ್ದಿಲ್ಲದೇ ಕಾರ್ಯ ಆರಂಭಿಸಿದೆ.

ff

WE ARE ALWAYS WONDER ABOUT SHARAVATHI BACKWATER. WE ARE, ALL.. TOGETHER ENJOYING HERE..! #MTRIDERSCLUB

THIS IS NEAREST TO HOSANAGARA CITY. USUALLY TRAVEL TO KODACHADRI, NITTUR AND KOLLUR  BY NAGARA ( FORT CITY ) ROUT. BUT THIS BEKKODU FERRYBOAT NEAR JAYANAGARA FACILITATE IT

Feel differenT

WWW.MALNADTOURISM.COM

 

Picturesque : HULIKAL ಬಿಳಿ ಹಾಲಿನ ತೊರೆ ಜಲಪಾತವಾಗಿ ನೆತ್ತಿಯ ಮೇಲಿಂದ ಜಿಗಿಯುತ್ತಿದ್ದರೆ ..!

ಹೊಸನಗರದಿಂದ ಕುಂದಾಪುರ ಹೋಗುವ ಮಾರ್ಗದಲ್ಲಿ ಸಿಗುವ ಹುಲಿಕಲ್ ಘಾಟಿಯ ಬಾಳೇಬರ ಜಲಪಾತ ಮುಂಗಾರಿನಿದ ಹಿಂಗಾರು ಆರಂಭದವರೆಗೆ ಮುದನೀಡುತ್ತದೆ.
iiiii

ಮೊದಲ ತಿರುವಿನಲ್ಲಿರುವ ಚಂಡಿಕಾದೇವಿಗೆ ನಮಸ್ಕರಿಸಿ ಒಂದೊಂದೇ ಸುತ್ತನ್ನು ಇಳಿಯುತ್ತಾ ಹೋದಂತೆ ನೆತ್ತಿಯ ಮೇಲೆ ಕಾಡು ಆವರಿಸುತ್ತಾ ಬರುತ್ತದೆ. ತಲೆ ಸುತ್ತುವಂತಹ ಕಡಿದಾದ ತಿರುವುಗಳು ಹಾವಿನಂತೆ ಅಂಕು ಡೊಂಕಾಗಿ ಸಾಗುತ್ತಿದ್ದಂತೆ ಆದ್ರತೆ ಆವರಿಸುತ್ತದೆ. ಝುಳು ಝುಳು ನಾದ ಮಾಡುತ್ತಿದ್ದಂತೆ ರಸ್ತೆಯ ಮೇಲೆ ನೀರು ಬಿದ್ದಿರುತ್ತೆ. ರಸ್ತೆಗೆ ಒರಗಿದ ಕಪ್ಪು ಶಿಲೆಗಳ ಮೇಲೆ ನೀರು ಜಿನುಗುತ್ತಿರುತ್ತೆ. ಕತ್ತು ಏತ್ತಿ ನೋಡಿದರೆ ಅಧ್ಬುತ ದೃಶ್ಯ ವೈಭವ..! . ಕಲ್ಲಿಗೆ ಒರಗಿಕೊಂಡು ಫೋಟೋ ತೆಗೆದುಕೊಳ್ಳುವುದರ ಜೊತೆಗೆ ನೆತ್ತಿ ಮೇಲಿಂದ ಬೀಳುವ ನೀರಿನ ಹತ್ತಿರವೂ ಹೋಗಬಹುದು. ರಭಸವಾಗಿ ಘಾಟ್‍ನಲ್ಲಿ ಸಾಗಿದರೆ ಖಂಡಿತಾ ಮಿಸ್ ಆಗುತ್ತೆ.
gajanana
HULIKAL IS A MOST BEAUTIFUL VILLAGE IN SHIVAMOGGA DISTRICT. THIS ROUTE CONNECTS SHIVAMOGGA TO MANGALORE. HERE  WE CAN SEE MANY FALLS BUT BALEBARA FALLS IS VERY BEAUTIFUL WHICH CAN BE SEEN DURING RAINY SEASON.
AUTHOR:TEAM MT, MTRIDERS

ಕೆಸರು ಹಾದಿಯಲ್ಲಿ ಕೊಸರಿದವರು, ಮುಳ್ಳಯ್ಯನಗಿರಿಯಿಂದ ಕಲ್ಲತ್ತಗಿರಿವರೆಗೆ

ಸಾಮಾನ್ಯವಾಗಿ ಕಾಲೇಜ್‍ಗೆ ಫಸ್ಟ್ ಕ್ಲಾಸ್ ಲೇಟಾಗಿ ಹೋಗ್ತೀವಿ ಆದರೆ ಪಕ್ಕದ ಜಿಲ್ಲೆಗೆ ಬೈಕ್‍ರೈಡ್ ಅಂದರೆ ಅಲರಾಂ ಹೊಡೆಯೋ ಮುನ್ನ ಟಾಯ್ಲೆಟ್‍ಲ್ಲಿ ಇರ್ತೀವಿ..ಹೀಗೆ ಅಲೆಮಾರಿಗಳ ತಂಡ ಹೊರಟಿದ್ದು ಚಿಕ್ಕಮಗಳೂರಿನ ಪ್ರವಾಸಿತಾಣಗಳತ್ತ. oo.jpgಮುಳ್ಳಯ್ಯನಗಿರಿ ಇಬ್ಬನಿಯಲ್ಲಿ ಒದ್ದೆಮಾಡಿಕೊಂಡು ಕೆಮ್ಮಣ್ಣುಗುಂಡಿಗೆ ಹೋಗುತ್ತಿರುವಾಗ, ಅಡ್ಡದಾರಿ ಎದುರಾಯಿತು, ಕೆಮ್ಮಣ್ಣುಗುಂಡಿ 32 ಕಿಲೋಮೀಟರ್. ಅಡ್ಡಹಾದಿ ಅರ್ಧದಷ್ಟು ಪ್ರಯಾಣದ ದೂರ ಕಡಿಮೆ ಮಾಡಬಹದು ಎಂಬ ಆಲೋಚನೆಯೊಂದಿಗೆ ಕಟ್ ಹೊಡೆದು ಕರೆಕ್ಟ್ ಆಗಿ ಕೆಸರು ಹೊಂಡಕ್ಕೆ ಬಿದ್ದಾಗ ಕಾಳಹಸ್ತಿ ಕಾಲೆಳೆದಂತೆ ಭಾಸವಾಯ್ತು.new qq.jpgಮೊದಲ ಹತ್ತು ಕಿಲೋಮೀಟರ್ ಎಡಕಲ್ಲು ಗುಡ್ಡದ ಮೇಲೆ ಹೀರೋ ತರಹ ಸಂತೋಷ ಅಹಾ..! ಓಹೋ..! ಎಂದು ಬೈಕ್ ಸಾಗುತ್ತಿದ್ದವು. ಹಾದಿಯಲ್ಲಿನ ಝರಿ-ಜಲಧಾರೆ, ಬೆಟ್ಟದ ಸಾಲು ಮನೋಹರವಾಗಿ ಕಾಣುತ್ತಿತ್ತು. ಸ್ವರ್ಗವೇ ಧರೆಗಿಳಿದಂತೆ ಎನಿಸತೊಡಗಿತು. ಆದರೆ ಜಿಟಿ ಜಿಟಿ ಮಳೆ ಮಾತ್ರ ಹಾದಿಯನ್ನು ಮಬ್ಬಾಗಿಸುತ್ತಿತ್ತು. ರಸ್ತೆಯ ಮೇಲೆ ಹರಡಿದ ನೀರು ಅಪಾಯಕಾರಿಯೇನಲ್ಲ ಎಂದು ಸ್ಪೀಡಲ್ಲೇ ಗಾಡಿ ನೀರಿಗೆ ಇಳಿದಾಗ….!!WhatsApp Image 2016-08-28 at 12.25.41 AM.jpegರಪ್ಪನೇ ಹೊಂಡಕ್ಕೆ ಬಿದ್ದಾಗ ಕನಸಿನಲ್ಲಿ ಕಣ್‍ಬಿಟ್ಟಂತಾಯಿತು. ಕೆಸರಲ್ಲಿನ ಎಮ್ಮೆಯಂತೆ ಹೊರಳಾಡುತ್ತಾ ಗಾಡಿ ಹಾಗೂ ಬಾಡಿ ಸರಿ ಮಾಡಿಕೊಂಡು ಕಲ್ಲತ್ತಗಿರಿ ( ಕಾಳಹಸ್ತಿ ) ಜಲಪಾತಕ್ಕೆ ಬಂದು ಸೇರಿದೆವು. ಊಟ ಮಾಡಿ ಶಿವಮೊಗ್ಗ ಸೇರುವುದರೊಳಗೆ ಕತ್ತಲಾಗಿತ್ತು

TEAM MT

ಮಧ್ಯ(ಮದ್ಯ)ರಾತ್ರಿ ದೈತ್ಯ ತಿರುವಿನಲ್ಲಿ ಕುಡುಕನ ಸ್ವಗತಗಳು

ರಾತ್ರಿಯಾಗಿ ಹೋಯ್ತು..ಹಸಿರು ಹೊದ್ದ ಕಾನನದ ನಡುವಿನ ಅಂಕುಡೊಂಕು ಹೆದ್ದಾರಿ ಹೀಗೇಕೆ ಹೆಬ್ಬಾವಿನ ರೀತಿ ಕಾಣುತ್ತಿದೆ. ತೀರ್ಥಹಳ್ಳಿಯಲ್ಲಿ ಪಾನಗೋಷ್ಠಿ ಮುಗಿಸೋದು ಸ್ವಲ್ಪ ಲೇಟಾಯ್ತು. ನಾನು ಯಾವ ದಿಕ್ಕಿಗೆ ಹೋಗುತ್ತಿದ್ದೇನೆ ಗೊತ್ತಾಗುತ್ತಿಲ್ಲ. ಕೊಪ್ಪ-ಶೃಂಗೇರಿ ಕಡೆಯೋ, ಆಗುಂಬೆ ಕಡೆಯೋ, ಹೊಸನಗರದ ಕಡೆಯೋ, ಸರಿಯಾಗಿ ಶಿವಮೊಗ್ಗದ ಹಾದಿಯೋ..?

MT RIDE

ಎಲ್ಲಾ ಹಾದಿಗಳು ಒಂದೇ ತರಹ, ನಾನೇ ಹಾದಿ ತಪ್ಪಿರಬಹುದೇ..? ನಮ್ಮೂರ ಹತ್ತಿರವಿದ್ದ ಆ ಭಯಂಕರ ತಿರುವು ಅರ್ಧ ಗಂಟೆಯಾದರೂ ಏಕೆ ಸಿಗಲಿಲ್ಲ..!
ಅಬ್ಬಾ.! ಒಂದು ಹೆಜ್ಜೆ ಕೆಳಗಿಟ್ಟಿದ್ದರೆ ಆ ಭಯಂಕರ ತಿರುವು ಬಳಸದೇ ಕೆಳಗಿನ ರಸ್ತೆಗೆ ಹಾರುತ್ತಿದ್ದೆ. ನಾನು ಹಾದಿ ತಪ್ಪಿಲ್ಲ ಎಂಬ ಅರಿವಾಗುವಷ್ಟರಲ್ಲಿ ಕುಡಿದಿದ್ದು ಇಳಿದೇ ಹೋಗಿತ್ತು
AUTHOR: MT