This wood board and Ferryboat in your popular cinema..!

ಹೊಸನಗರದಿಂದ ಸಂಪೆಕಟ್ಟೆಗೆ ಜಲಮಾರ್ಗ…!

ನಗರ ಬಳಸದೇ ಸಂಪೇಕಟ್ಟೆ ನಿಟ್ಟೂರಿಗೆ ಹೋಗಬಹುದು..!
ಹೊಸನಗರದಿಂದ ಸಂಪೇಕಟ್ಟೆ, ಕೊಡಚಾದ್ರಿ ಹಾಗೂ ನಿಟ್ಟೂರಿಗೆ ಹೋಗಬೇಕಾದರೆ ನಗರ ಹೋಗಿ ಅಲ್ಲಿಂದ ಹೋಗಬೇಕಿತ್ತು. ನಗರ ಕೋಟೆ ಬಿಟ್ಟರೆ ಇನ್ನೇನು ಅಲ್ಲಿ ಸಿಗುವುದಿಲ್ಲ, ಆ ದಾರಿ ತುಂಬಾ ಸಮಯವನ್ನೂ ಕೂಡ ನುಂಗಿ ಹಾಕುತ್ತದೆ. ನೀರಿನ ಸೌಂದರ್ಯ ನೋಡಲು ಬಯಸುವವರು ಈಗ ಬೆಕ್ಕೋಡು ಸೇತುವೆಯ ಬಳಿಯ ಲಾಂಚ್ ಮೂಲಕ ನಿಟ್ಟೂರು ಹೋಗಬಹುದು. ಮಳಲಿಯಿಂದ ಹೆಬ್ಬುರಳಿ ಅಲ್ಲಿಂದ ಸಂಪೇಕಟ್ಟೆಗೆ ಹೋಗಬಹುದು. ತುಂಬಾ ಜನ ಯಾತ್ರಿಕರೂ ಕೂಡ ಕೊಲ್ಲೂರಿಗೆ ಹೋಗುವವರು ನಗರದಲ್ಲಿ ಗಿರಕಿ ಹೊಡೆದು ಬರುವುದನ್ನು ತಪ್ಪಿಸಿಕೊಳ್ಳಬಹುದು. ಕಾರ್‍ಗಳನ್ನು ಹೊತ್ತೊಯ್ಯುವ ಸಾಮಥ್ಯ ಈ ಲಾಂಚ್‍ಗೆ ಇದೆ. ಕೆಪಿಸಿಯವರು ನೀಡಿರುವ ಈ ಲಾಂಚ್ ಸದ್ದಿಲ್ಲದೇ ಕಾರ್ಯ ಆರಂಭಿಸಿದೆ.

ff

WE ARE ALWAYS WONDER ABOUT SHARAVATHI BACKWATER. WE ARE, ALL.. TOGETHER ENJOYING HERE..! #MTRIDERSCLUB

THIS IS NEAREST TO HOSANAGARA CITY. USUALLY TRAVEL TO KODACHADRI, NITTUR AND KOLLUR  BY NAGARA ( FORT CITY ) ROUT. BUT THIS BEKKODU FERRYBOAT NEAR JAYANAGARA FACILITATE IT

Feel differenT

WWW.MALNADTOURISM.COM

 

Advertisements

ಮಧ್ಯ(ಮದ್ಯ)ರಾತ್ರಿ ದೈತ್ಯ ತಿರುವಿನಲ್ಲಿ ಕುಡುಕನ ಸ್ವಗತಗಳು

ರಾತ್ರಿಯಾಗಿ ಹೋಯ್ತು..ಹಸಿರು ಹೊದ್ದ ಕಾನನದ ನಡುವಿನ ಅಂಕುಡೊಂಕು ಹೆದ್ದಾರಿ ಹೀಗೇಕೆ ಹೆಬ್ಬಾವಿನ ರೀತಿ ಕಾಣುತ್ತಿದೆ. ತೀರ್ಥಹಳ್ಳಿಯಲ್ಲಿ ಪಾನಗೋಷ್ಠಿ ಮುಗಿಸೋದು ಸ್ವಲ್ಪ ಲೇಟಾಯ್ತು. ನಾನು ಯಾವ ದಿಕ್ಕಿಗೆ ಹೋಗುತ್ತಿದ್ದೇನೆ ಗೊತ್ತಾಗುತ್ತಿಲ್ಲ. ಕೊಪ್ಪ-ಶೃಂಗೇರಿ ಕಡೆಯೋ, ಆಗುಂಬೆ ಕಡೆಯೋ, ಹೊಸನಗರದ ಕಡೆಯೋ, ಸರಿಯಾಗಿ ಶಿವಮೊಗ್ಗದ ಹಾದಿಯೋ..?

MT RIDE

ಎಲ್ಲಾ ಹಾದಿಗಳು ಒಂದೇ ತರಹ, ನಾನೇ ಹಾದಿ ತಪ್ಪಿರಬಹುದೇ..? ನಮ್ಮೂರ ಹತ್ತಿರವಿದ್ದ ಆ ಭಯಂಕರ ತಿರುವು ಅರ್ಧ ಗಂಟೆಯಾದರೂ ಏಕೆ ಸಿಗಲಿಲ್ಲ..!
ಅಬ್ಬಾ.! ಒಂದು ಹೆಜ್ಜೆ ಕೆಳಗಿಟ್ಟಿದ್ದರೆ ಆ ಭಯಂಕರ ತಿರುವು ಬಳಸದೇ ಕೆಳಗಿನ ರಸ್ತೆಗೆ ಹಾರುತ್ತಿದ್ದೆ. ನಾನು ಹಾದಿ ತಪ್ಪಿಲ್ಲ ಎಂಬ ಅರಿವಾಗುವಷ್ಟರಲ್ಲಿ ಕುಡಿದಿದ್ದು ಇಳಿದೇ ಹೋಗಿತ್ತು
AUTHOR: MT

ಗುಳಿ ಗುಳಿ ಶಂಕರ ಎಂಬ ಮಾಯಾಕೊಳ

ಪುರಾಣಗಳು ಹಾಗೂ ರಾಜರ ಕಾಲದಲ್ಲಿದ್ದ ಅನೇಕ ಪ್ರದೇಶಗಳು ಮಲೆನಾಡಿನ ಮೂಲೆ ಮೂಲೆಯಲ್ಲೂ ಹರಡಿಕೊಂಡಿವೆ. ಬೆಟ್ಟ, ಕಾಡು, ಕಣಿವೆಗಳಲ್ಲಿ ಇಂತಹ ಸ್ಥಳಗಳು ಕಾಣಸಿಗುತ್ತವೆ ಅಂತಹ ಸ್ಥಳಗಳಲ್ಲಿ ಒಂದು ಈ ಗುಳಿ ಗುಳಿ ಶಂಕರ

Aviary Photo_131151412216521667.png

 ಗುಳಿ ಗುಳಿ ಎಂಬುದು ಶಂಕರನ ಮಾಯಾಕೊಳದಿಂದ ಬಂದಂತಹ ಹೆಸರು. ಈ ಸ್ಥಳದಲ್ಲಿ ಇತ್ತೀಚೆಗೆ ನಿರ್ಮಿಸಿದ ಒಂದು ದೇವಸ್ಥಾನವಿದೆ. ಅದರೊಳಗೆ ಶಂಕರನ ಮೂರ್ತಿಯಿದೆ. ಆದರೆ ಈ ದೇವಸ್ಥಾನದಿಂದಗಲೀ ಆ ಮೂರ್ತಿಯಿಂದಾಗಲೀ ಈ ಸ್ಥಳಕ್ಕೆ ದೈವಕಳೆ ಬಂದಿದ್ದಲ್ಲ. ದೇವಸ್ಥಾನದಿಂದ ಕೆಳಗೆ ಅಡಕೆ ತೋಟ ಕಾಣುತ್ತದೆ. ಅಲ್ಲಿದೆ ವಿಸ್ಮಯಕಾರಿ ಕೊಳ.DSCN2954.JPG
ಈ ಕೊಳದ ಹೆಸರೇ ಗುಳಿ ಗುಳಿ ಶಂಕರ. ಈ ಕೊಳವನ್ನು ಜೀವನದಲ್ಲೊಮ್ಮೆ ನೋಡಲೇ ಬೇಕು..! ಅಷ್ಟೊಂದು ವಿಸ್ಮಯಕಾರಿ..!  ಈ ಕೊಳಕ್ಕೆ ಯಾವ ಕಡೆಯಿಂದಲೂ ನೀರು ಬರೋದಿಲ್ಲ. ಆದರೆ ಈ ಕೊಳದಿಂದ ಸುಮಾರು ಮೂರು ಇಂಚ್ ನೀರು ಸದಾ ಹೊರಗೆ ಹೋಗುತ್ತಿರುತ್ತದೆ. ಕೊಳದ ತುಂಬಾ ಬಂಗಾರದ ಬಣ್ಣದಲ್ಲಿ ಹೊಳೆಯುವ ಪಾಚಿ ಉದ್ದನೆ ಬೆಳೆದುಕೊಂಡಿದೆ. ಹೊರಗೆ ಚಿಮ್ಮಲು ಹವಣಿಸಿದಂತೆ ಕಾಣುತ್ತದೆ. ಆದರೆ ನೀರಿನ ಮೇಲೆ ಬೆಳೆಯುವುದಿಲ್ಲ. ತುಂಡಾಗಿರುವ ಪಾಚಿ ಮಾತ್ರ ಹೊರಗೆ ಬರುತ್ತದೆ. ಇದನ್ನು ಅಲ್ಲಿಯವರು ಶಿವನ ಜಟೆ ಎಂದು ಕರೆಯುತ್ತಾರೆ.DSCN2940.JPG
ಈ ಕೊಳದ ನೀರು ಕುಡಿದು ಚರ್ಮವ್ಯಾದಿಯನ್ನು ಗುಣ ಪಡಿಸಿಕೊಂಡವರಿದ್ದಾರೆ.  ಕೊಳದ ಬಳಿ ಬಂದು ಯಾವುದೇ ಎಲೆಯನ್ನು ನೀರಲ್ಲಿ ಅದ್ದಿ ಕೊಳದಲ್ಲಿ ಬಿಟ್ಟರೆ ತೇಲುತ್ತದೆ. ಆದರೆ ಬಿಲ್ವಪತ್ರೆ ಮಾತ್ರ ಮುಳುಗುತ್ತದೆ. ಮನಸ್ಸಿನಲ್ಲಿ ಬೇಡಿಕೊಂಡು ಬಿಲ್ವಪತ್ರೆ ಮುಳುಗಿಸಿದರೆ ಅಂದುಕೊಂಡ ಕಾರ್ಯ ಸಿದ್ಧಿಯಾಗುವುದಾದರೆ ಅದೇ ಬಿಲ್ವಪತ್ರೆ ಇಪ್ಪತ್ತು ನಿಮಿಷಗಳಲ್ಲಿ ಮೇಲೆ ಬರುತ್ತೆ. ಈ ವಿಸ್ಮಯ ಕೊಳದ ಮೂಲೆಯಲ್ಲಿ ತಿಳಿನೀರಿನ ಕೆಳಗೆ ಹೊಳೆಯುತ್ತಿದೆ ಶಿವಲಿಂಗ. ಯಾವುದೋ ಆಳ ಸಮುದ್ರದಲ್ಲಿ ಮುತ್ತುಗಳ ನಡುವೆ ಹುದುಗಿದ ಕಲ್ಲಿನ ತರಹ ಕಾಣುತ್ತಿರುತ್ತದೆ. ಕೊಳದ ಬಳಿ ನಿಂತು ಚಪ್ಪಾಳೆ ತಟ್ಟಿದರೆ, ಅಥವಾ ಜೋರಾಗಿ ಮಾತನಾಡಿದರೆ ನೀರಿನ ಆಳದಿಂದ ಗುಳ್ಳೆಗಳು ಮೇಲೆದ್ದು ಬರುತ್ತವೆ. ಆ ಕಾರಣದಿಂದಲೇ ಇದಕ್ಕೆ ಗುಳಿಗುಳಿ ಶಂಕರ ಎಂಬ ಹೆಸರು ಬಂದಿತು.
ಮಳೆಗಾಲಕ್ಕಿಂತ ಬೇಸಿಗೆಯಲ್ಲೇ ನೀರು ಹೆಚ್ಚು ಉಕ್ಕುತ್ತೆ, ಈ ನೀರಿನ ಸಾಂದ್ರತೆ ಹೆಚ್ಚಿದ್ದು ಖನಿಜಗಳು ಕರಗಿರುವುದು ಸಂಶೋಧನೆಯಿಂದ ದೃಢಪಟ್ಟಿದೆ. ನೀರನ್ನು ಕುಡಿದರೆ ಶಕ್ತಿ ಬಂದಂತೆ ಭಾಸವಾಗುತ್ತದೆ. ಹಿಂದೆ ಈ ಪ್ರದೇಶ ದುರ್ಗಮ ಕಾಡಿನಿಂದ ಕೂಡಿತ್ತು. ಈಗಲೂ ಈ ಹಾದಿಯಲ್ಲಿ ಹೋಗುವಾಗ ಭಯವಾಗುತ್ತದೆ. ಆದರೆ ಜನರು ಕಾಡಿನ ಮಧ್ಯೆ ಬಂದು ನೆಲೆಸಿ ಊರನ್ನಾಗಿಸಿದ್ದಾರೆ. ಭಕ್ತರ ಹಣದಿಂದಲೇ ಶಂಕರನಿಗೆ ದೇವಸ್ಥಾನ ನಿರ್ಮಾಣವಾಗಿದೆ. ಕೊಳಕ್ಕೆ ಕಟ್ಟೆ ಕಟ್ಟಲಾಗಿದೆ. ಇಡೀ ದೇವಸ್ಥಾನದ ಮುತುವರ್ಜಿಯನ್ನು ದೇವಸ್ಥಾನದ ಕಮಿಟಿ ನಿರ್ವಹಿಸುತ್ತಿದೆ.
DSCN2923.JPG
ಹೋಗುವುದು ಹೇಗೆ..?
ಶಿವಮೊಗ್ಗ ನಗರದಿಂದ ಸಾಗರ ರಸ್ತೆಯಲ್ಲಿ ತೆರಳಿದರೆ ಆಯನೂರು ಪಟ್ಟಣ, ಆಲ್ಲಿಂದ ಹೊಸನಗರ ಮಾರ್ಗವಾಗಿ ತೆರಳುವಾಗ ಇಪ್ಪತ್ತು ಕಿಲೋಮೀಟರ್ ಅಂತರದಲ್ಲಿ ಬೋರ್ಡ್ ಕಾಣಿಸುತ್ತದೆ. ಬೋರ್ಡ್ ಅನುಸರಿಸಿ ಹೋದರೆ ಬೆಳ್ಳೂರು ಗ್ರಾಮ ಪಂಚಾಯಿತಿ, ಗುಬ್ಬಿಗ ಗ್ರಾಮವಿದೆ. ಅದರ ಸಮೀಪವೇ ಈ ವಿಸ್ಮಯ ಕೊಳವಿದೆ. ರಿಪ್ಪನ್ ಪೇಟೆಯಿಂದ ತೀರ್ಥಹಳ್ಳಿ ಮಾರ್ಗವಾಗಿ ಬಂದರೆ ಮುಗುಡ್ತಿ ಎಂಬ ಸ್ಥಳದಲ್ಲಿ ತಿರುವು ಪಡೆದುಕೊಂಡರೆ ಈ ಸ್ಥಳ ತಲುಪಬಹುದು. ಶಿವಮೊಗ್ಗ ನಗರದಿಂದ ಸಮೀಪ ಇರುವ ಅದ್ಭುತ ಸ್ಥಳ ಗುಳಿ ಗುಳಿ ಶಂಕರ.
ಮಲ್ನಾಡ್ ಟೂರಿಸಂ ವೆಬ್‍ಸೈಟ್‍ನಲ್ಲೂ ಲಭ್ಯ
AUTHOR: MALNAD TOURISM
 https://youtu.be/-CmZclYEjJY