ಹೋಗುವಾಗ ಇರಲಿಲ್ಲ ಮಾರಾಯ ಬರ್ತಾ ಅರ್ಧ ಅಡಿ ಬಂದಿತ್ತು : MT AT MANDAGADDE

ತೀರ್ಥಹಳ್ಳಿ ತಾಲೂಕಿನ ಮಂಡಗದ್ದೆಯ ಪ್ರಾಕೃತಿಕ ಸೊಬಗಿಗೆ ಮನಸೋಲದವರಿಲ್ಲ. ಶಿವಮೊಗ್ಗ-ತೀರ್ಥಹಳ್ಳಿ ಹೆದ್ದಾರಿಯಲ್ಲಿ ಸಿಗುವ ಈ ಸ್ಥಳ ಪಕ್ಷಿ ಪ್ರಿಯರಿಗಷ್ಟೇ ಅಲ್ಲ ಪೃಕೃತಿ ಪ್ರಿಯರಿಗೆಲ್ಲಾ ಅಚ್ಚುಮೆಚ್ಚು.

Aviary Photo_131152246819004781.png

ಬೆಳಗ್ಗೆ ಹೋಗುವಾಗ ರಸ್ತೆಯಂಚಿನಲ್ಲಿದ್ದ ತುಂಗಾ ನದಿ ನೀರು ವಾಪಸ್ ಬರುವಾಗ ರಸ್ತೆ ಮೇಲೆ ಅರ್ಧ ಅಡಿ ಬಂದು ಬಿಟ್ಟಿದೆ ಮಾರಾಯ. ಬೈಕ್‍ಗಳು ಸ್ವಲ್ಪ ನಿಧಾನ ಹೋದರೂ…. ಬಸ್‍ನೆವು ಇದಾವಲ್ಲ, ಇತಿ ಮಿತಿ ಇಲ್ದಂಗೆ ಹೋಡಿತ್ವು. ಆಗ ನೋಡಕ್ಕೆ ಎಷ್ಟು ಚಂದ ಕಾಣ್ತು ಗೊತ್ತಾ, ಕಾರಂಜಿ ತರ ನೀರು ಮೇಲಕ್ಕೆ ಹಾರ್ತಿತ್ತು. ಆ ಡ್ಯಾಮ್‍ಲ್ಲಿರೋ ಇಂಜೀನಿಯರ್ರು ನೀರು ಜಾಸ್ತಿ ಆಗ್ತಿದ್ದಂತೆ ಬಿಡ್ತ್ವು. ಹಂಗಾಗಿ ಪ್ರಾಬ್ಲಮ್ಮು ಇಲ್ಲ. ಕಳೆದ ವರ್ಷ ಅಲ್ಲ ಆಯನೂರು ಮೇಲೆ ಹೋಗಂಗಾಗಿತ್ತು.
(C) MALNAD TOURISM ( MT RIDE )
Advertisements

ಗುಳಿ ಗುಳಿ ಶಂಕರ ಎಂಬ ಮಾಯಾಕೊಳ

ಪುರಾಣಗಳು ಹಾಗೂ ರಾಜರ ಕಾಲದಲ್ಲಿದ್ದ ಅನೇಕ ಪ್ರದೇಶಗಳು ಮಲೆನಾಡಿನ ಮೂಲೆ ಮೂಲೆಯಲ್ಲೂ ಹರಡಿಕೊಂಡಿವೆ. ಬೆಟ್ಟ, ಕಾಡು, ಕಣಿವೆಗಳಲ್ಲಿ ಇಂತಹ ಸ್ಥಳಗಳು ಕಾಣಸಿಗುತ್ತವೆ ಅಂತಹ ಸ್ಥಳಗಳಲ್ಲಿ ಒಂದು ಈ ಗುಳಿ ಗುಳಿ ಶಂಕರ

Aviary Photo_131151412216521667.png

 ಗುಳಿ ಗುಳಿ ಎಂಬುದು ಶಂಕರನ ಮಾಯಾಕೊಳದಿಂದ ಬಂದಂತಹ ಹೆಸರು. ಈ ಸ್ಥಳದಲ್ಲಿ ಇತ್ತೀಚೆಗೆ ನಿರ್ಮಿಸಿದ ಒಂದು ದೇವಸ್ಥಾನವಿದೆ. ಅದರೊಳಗೆ ಶಂಕರನ ಮೂರ್ತಿಯಿದೆ. ಆದರೆ ಈ ದೇವಸ್ಥಾನದಿಂದಗಲೀ ಆ ಮೂರ್ತಿಯಿಂದಾಗಲೀ ಈ ಸ್ಥಳಕ್ಕೆ ದೈವಕಳೆ ಬಂದಿದ್ದಲ್ಲ. ದೇವಸ್ಥಾನದಿಂದ ಕೆಳಗೆ ಅಡಕೆ ತೋಟ ಕಾಣುತ್ತದೆ. ಅಲ್ಲಿದೆ ವಿಸ್ಮಯಕಾರಿ ಕೊಳ.DSCN2954.JPG
ಈ ಕೊಳದ ಹೆಸರೇ ಗುಳಿ ಗುಳಿ ಶಂಕರ. ಈ ಕೊಳವನ್ನು ಜೀವನದಲ್ಲೊಮ್ಮೆ ನೋಡಲೇ ಬೇಕು..! ಅಷ್ಟೊಂದು ವಿಸ್ಮಯಕಾರಿ..!  ಈ ಕೊಳಕ್ಕೆ ಯಾವ ಕಡೆಯಿಂದಲೂ ನೀರು ಬರೋದಿಲ್ಲ. ಆದರೆ ಈ ಕೊಳದಿಂದ ಸುಮಾರು ಮೂರು ಇಂಚ್ ನೀರು ಸದಾ ಹೊರಗೆ ಹೋಗುತ್ತಿರುತ್ತದೆ. ಕೊಳದ ತುಂಬಾ ಬಂಗಾರದ ಬಣ್ಣದಲ್ಲಿ ಹೊಳೆಯುವ ಪಾಚಿ ಉದ್ದನೆ ಬೆಳೆದುಕೊಂಡಿದೆ. ಹೊರಗೆ ಚಿಮ್ಮಲು ಹವಣಿಸಿದಂತೆ ಕಾಣುತ್ತದೆ. ಆದರೆ ನೀರಿನ ಮೇಲೆ ಬೆಳೆಯುವುದಿಲ್ಲ. ತುಂಡಾಗಿರುವ ಪಾಚಿ ಮಾತ್ರ ಹೊರಗೆ ಬರುತ್ತದೆ. ಇದನ್ನು ಅಲ್ಲಿಯವರು ಶಿವನ ಜಟೆ ಎಂದು ಕರೆಯುತ್ತಾರೆ.DSCN2940.JPG
ಈ ಕೊಳದ ನೀರು ಕುಡಿದು ಚರ್ಮವ್ಯಾದಿಯನ್ನು ಗುಣ ಪಡಿಸಿಕೊಂಡವರಿದ್ದಾರೆ.  ಕೊಳದ ಬಳಿ ಬಂದು ಯಾವುದೇ ಎಲೆಯನ್ನು ನೀರಲ್ಲಿ ಅದ್ದಿ ಕೊಳದಲ್ಲಿ ಬಿಟ್ಟರೆ ತೇಲುತ್ತದೆ. ಆದರೆ ಬಿಲ್ವಪತ್ರೆ ಮಾತ್ರ ಮುಳುಗುತ್ತದೆ. ಮನಸ್ಸಿನಲ್ಲಿ ಬೇಡಿಕೊಂಡು ಬಿಲ್ವಪತ್ರೆ ಮುಳುಗಿಸಿದರೆ ಅಂದುಕೊಂಡ ಕಾರ್ಯ ಸಿದ್ಧಿಯಾಗುವುದಾದರೆ ಅದೇ ಬಿಲ್ವಪತ್ರೆ ಇಪ್ಪತ್ತು ನಿಮಿಷಗಳಲ್ಲಿ ಮೇಲೆ ಬರುತ್ತೆ. ಈ ವಿಸ್ಮಯ ಕೊಳದ ಮೂಲೆಯಲ್ಲಿ ತಿಳಿನೀರಿನ ಕೆಳಗೆ ಹೊಳೆಯುತ್ತಿದೆ ಶಿವಲಿಂಗ. ಯಾವುದೋ ಆಳ ಸಮುದ್ರದಲ್ಲಿ ಮುತ್ತುಗಳ ನಡುವೆ ಹುದುಗಿದ ಕಲ್ಲಿನ ತರಹ ಕಾಣುತ್ತಿರುತ್ತದೆ. ಕೊಳದ ಬಳಿ ನಿಂತು ಚಪ್ಪಾಳೆ ತಟ್ಟಿದರೆ, ಅಥವಾ ಜೋರಾಗಿ ಮಾತನಾಡಿದರೆ ನೀರಿನ ಆಳದಿಂದ ಗುಳ್ಳೆಗಳು ಮೇಲೆದ್ದು ಬರುತ್ತವೆ. ಆ ಕಾರಣದಿಂದಲೇ ಇದಕ್ಕೆ ಗುಳಿಗುಳಿ ಶಂಕರ ಎಂಬ ಹೆಸರು ಬಂದಿತು.
ಮಳೆಗಾಲಕ್ಕಿಂತ ಬೇಸಿಗೆಯಲ್ಲೇ ನೀರು ಹೆಚ್ಚು ಉಕ್ಕುತ್ತೆ, ಈ ನೀರಿನ ಸಾಂದ್ರತೆ ಹೆಚ್ಚಿದ್ದು ಖನಿಜಗಳು ಕರಗಿರುವುದು ಸಂಶೋಧನೆಯಿಂದ ದೃಢಪಟ್ಟಿದೆ. ನೀರನ್ನು ಕುಡಿದರೆ ಶಕ್ತಿ ಬಂದಂತೆ ಭಾಸವಾಗುತ್ತದೆ. ಹಿಂದೆ ಈ ಪ್ರದೇಶ ದುರ್ಗಮ ಕಾಡಿನಿಂದ ಕೂಡಿತ್ತು. ಈಗಲೂ ಈ ಹಾದಿಯಲ್ಲಿ ಹೋಗುವಾಗ ಭಯವಾಗುತ್ತದೆ. ಆದರೆ ಜನರು ಕಾಡಿನ ಮಧ್ಯೆ ಬಂದು ನೆಲೆಸಿ ಊರನ್ನಾಗಿಸಿದ್ದಾರೆ. ಭಕ್ತರ ಹಣದಿಂದಲೇ ಶಂಕರನಿಗೆ ದೇವಸ್ಥಾನ ನಿರ್ಮಾಣವಾಗಿದೆ. ಕೊಳಕ್ಕೆ ಕಟ್ಟೆ ಕಟ್ಟಲಾಗಿದೆ. ಇಡೀ ದೇವಸ್ಥಾನದ ಮುತುವರ್ಜಿಯನ್ನು ದೇವಸ್ಥಾನದ ಕಮಿಟಿ ನಿರ್ವಹಿಸುತ್ತಿದೆ.
DSCN2923.JPG
ಹೋಗುವುದು ಹೇಗೆ..?
ಶಿವಮೊಗ್ಗ ನಗರದಿಂದ ಸಾಗರ ರಸ್ತೆಯಲ್ಲಿ ತೆರಳಿದರೆ ಆಯನೂರು ಪಟ್ಟಣ, ಆಲ್ಲಿಂದ ಹೊಸನಗರ ಮಾರ್ಗವಾಗಿ ತೆರಳುವಾಗ ಇಪ್ಪತ್ತು ಕಿಲೋಮೀಟರ್ ಅಂತರದಲ್ಲಿ ಬೋರ್ಡ್ ಕಾಣಿಸುತ್ತದೆ. ಬೋರ್ಡ್ ಅನುಸರಿಸಿ ಹೋದರೆ ಬೆಳ್ಳೂರು ಗ್ರಾಮ ಪಂಚಾಯಿತಿ, ಗುಬ್ಬಿಗ ಗ್ರಾಮವಿದೆ. ಅದರ ಸಮೀಪವೇ ಈ ವಿಸ್ಮಯ ಕೊಳವಿದೆ. ರಿಪ್ಪನ್ ಪೇಟೆಯಿಂದ ತೀರ್ಥಹಳ್ಳಿ ಮಾರ್ಗವಾಗಿ ಬಂದರೆ ಮುಗುಡ್ತಿ ಎಂಬ ಸ್ಥಳದಲ್ಲಿ ತಿರುವು ಪಡೆದುಕೊಂಡರೆ ಈ ಸ್ಥಳ ತಲುಪಬಹುದು. ಶಿವಮೊಗ್ಗ ನಗರದಿಂದ ಸಮೀಪ ಇರುವ ಅದ್ಭುತ ಸ್ಥಳ ಗುಳಿ ಗುಳಿ ಶಂಕರ.
ಮಲ್ನಾಡ್ ಟೂರಿಸಂ ವೆಬ್‍ಸೈಟ್‍ನಲ್ಲೂ ಲಭ್ಯ
AUTHOR: MALNAD TOURISM
 https://youtu.be/-CmZclYEjJY

ಮಲೆನಾಡಿನ ಮಕ್ಕಳು ಈಜು ಕಲಿಯಲು ಪೃಕೃತಿಯಿಂದ ಪೂರಕ ವಾತಾವರಣ

ಮಲೆನಾಡಿನಲ್ಲಿ ಈಜು ಕಲಿಯಲೇಬೇಕಾದ ಅನಿವಾರ್ಯವಿದೆ. ಆದರೆ ಎಲ್ಲೆಂದರಲ್ಲಿ ಈಜು ಕಲಿಯಲು ಆಗುವುದಿಲ್ಲ. ಏಕೆಂದರೆ ಇಲ್ಲಿನ ನೀರಿನ ಮೂಲಗಳು ಹಾಗೂ ಹರಿವಿನ ಆಳ ಅಗಲಗಳನ್ನು ಅಳೆಯಲು ಆಗುವುದಿಲ್ಲ. MT ಮಲೆನಾಡಿನ ಮಕ್ಕಳು ಈಜು ಕಲಿಯಲು ಬೇಕಾದ ವಾತಾವರಣವನ್ನು ಪ್ರಕೃತಿಯೇ ನಿರ್ಮಾಣ ಮಾಡಿರುತ್ತೆ. ಹೇಗೆ ಅನ್ನೋದನ್ನ ಪದಗಳಲ್ಲಿ ಹೇಳಲು ಸಾಧ್ಯವಿಲ್ಲ, ಪಟದಲ್ಲಿ ನೋಡಿ.MT1.jpg PHOTO : NEAR RIPPONPET, HOSANAGARA ROAD

 

Leech-gatherers in Yadur ಉಂಬಳದ ಕಾಡಲ್ಲಿ ರಕ್ತದಾನ

ವಿಲಿಯಂ ವರ್ಡ್ಸ್ ವರ್ತ್ ನ  ರೆಸುಲ್ಯೂಷನ್ ಅಂಡ್ ಇಂಡಿಪೆಂಡೆನ್ಸ್ ಲ್ಲಿ  ಲೀಚ್ ಗ್ಯಾದರರ್ ಅದೇ ಜಿಗಣೆ ಸಂಗ್ರಹಕನ ಬಗ್ಗೆ ಓದಿರ್ತೀರಾ..ಆದರೆ ನಮ್ಮೂರು ಕಾಡಿನಲ್ಲಿ ಉಂಬಳ ಆಯುವವರನ್ನು ನೋಡಿದ್ದೀರಾ..ಒಮ್ಮೆ ಬನ್ನಿ ಕೊಡಚಾದ್ರಿ, ಹುಲಿಕಲ್ ಆಸುಪ…

Source: Leech-gatherers in Yadur ಉಂಬಳದ ಕಾಡಲ್ಲಿ ರಕ್ತದಾನ