Leech-gatherers in Yadur ಉಂಬಳದ ಕಾಡಲ್ಲಿ ರಕ್ತದಾನ

ವಿಲಿಯಂ ವರ್ಡ್ಸ್ ವರ್ತ್ ನ  ರೆಸುಲ್ಯೂಷನ್ ಅಂಡ್ ಇಂಡಿಪೆಂಡೆನ್ಸ್ ಲ್ಲಿ  ಲೀಚ್ ಗ್ಯಾದರರ್ ಅದೇ ಜಿಗಣೆ ಸಂಗ್ರಹಕನ ಬಗ್ಗೆ ಓದಿರ್ತೀರಾ..ಆದರೆ ನಮ್ಮೂರು ಕಾಡಿನಲ್ಲಿ ಉಂಬಳ ಆಯುವವರನ್ನು ನೋಡಿದ್ದೀರಾ..ಒಮ್ಮೆ ಬನ್ನಿ ಕೊಡಚಾದ್ರಿ, ಹುಲಿಕಲ್ ಆಸುಪಾಸಿಗೆ. UMBALA

ಮಲ್ನಾಡ್ ಟೂರಿಸಂನೊಂದಿಗೆ ಅಲೆಮಾರಿ ಗೆಳೆಯರ ಬಳಗ ಗೊತ್ತು ಗುರಿಯಿಲ್ಲದೇ ಹೊಸನಗರ ಹಾಗೂ ತೀರ್ಥಹಳ್ಳಿಯತ್ತ ಸಾಗಿತ್ತು. ಯಡೂರಿಗೆ ಬಂದಾಗ ಹೊತ್ತು ಸಂಜೆಯತ್ತ ಜಾರಿತ್ತು. ಗೌಡ್ರು ಹೋಟೆಲ್ ಅಡ್ರೆಸ್ ಹುಡುಕಿಕೊಂಡು ಬಂದು ಮಾಣಿ ಡ್ಯಾಂ ರಸ್ತೆಯಲ್ಲಿ ನಿಂತಾಗ ಕಾಲೇಜು ಹುಡುಗನೊಬ್ಬ ಬೈಕ್‍ನಲ್ಲಿ ಬರುತ್ತಿದ್ದ. ನಿಲ್ಲಿಸಿ ಗುರು ಇಲ್ಲೆಲ್ಲೋ ಒಂದು ಗೌಡ್ರು ಹೋಟೆಲ್ ಇದೆ ಅಂತ ಕವಲೇದುರ್ಗದ ಬಿಲ್‍ಕಲೆಕ್ಟರ್ ಹೇಳಿದ ಎಲ್ಲಿ ಮಾರಾಯ ಅದು,  ನಮಗೆ ವೆಜ್ಜು, ನಾನ್ ವೆಜ್ಜು ಎರಡೂ ಬೇಕಿತ್ತು ಹೇಳಿದ್ವಿ. ಅವನ ಹೆಸರು ಅವಿನಾಶ ಅಂತ. ಅಣ್ಣ ಇವತ್ತು ಅವರ ಹೋಟೆಲ್ ಬಂದ್, ಅಷ್ಟಕ್ಕೂ ಕವಲೇದುರ್ಗದಲ್ಲೇನಿದೆ ಅಂತದ್ದು ಅಂದುಬಿಟ್ಟ..!DSCN24362.jpg
IN photo : Arjun and Anvith
ಅಯ್ಯಯ್ಯೋ ಇವನ್ಯಾರು ಗುರು ಅಂತ ನಮಗೇ ಆಶ್ಚರ್ಯ ಆಯ್ತು. ಅಲ್ಲೇ ಪಕ್ಕದಲ್ಲಿದ್ದ ಟೀ ಅಂಗಡಿಯಲ್ಲಿ ಅವಲಕ್ಕಿ ತಿಂದ್ವಿ. ಲೇ ಅವಿನಾಶ ಇಲ್ಲಿ ಪಕ್ಕದಲ್ಲಿ ಅರ್ಜೆಂಟಾಗಿ ನೋಡುವಂತಹದ್ದು ಏನಿದೆ ಅಂತ ಕೇಳಿದ್ವಿ. ಇಲ್ಲೇ ಐದು ಕಿಲೋಮೀಟರ್ ಒಂದು ಅಬ್ಬಿ ಇದೆ, ಜಲಪಾತದ ರೀತಿ ಹರಿಯುತ್ತೆ ಹೋಗಿ ಬನ್ನಿ ಅಂದ. ಲೇ ನೀನೇ ಬಾರೋ ಅಂತ ಕರೆದುಕೊಂಡು ಹೋದ್ವಿ. ಪುಣ್ಯಾತ್ಮ, ರಕ್ತ ಹೀರೋ ಉಂಬಳಗಳಿವೆ ಅಲ್ಲಿ ಅಂತ ಮೊದಲೇ ಹೇಳಲೇ ಇಲ್ಲ ನೋಡಿ…!!
DSCN2434.jpg
IN PHOTO : AVINASH, YADUR
ಪೊದೆಗಳ ನಡುವೆ ಕಿರುದಾರಿ, ಟಾರು ರಸ್ತೆಯಂಚಿಗೆ ಕಾರ್ ಪಾರ್ಕಿಂಗ್, ಅರ್ಜುನ್ ಶ್ರೀನಿವಾಸ್‍ಗಷ್ಟೇ ಅಲ್ಲ ನಮ್ಮಲ್ಲಿ ತುಂಬಾ ಜನರಿಗೂ ಮಲೆನಾಡಿನ ಉಂಬಳದ ಪರಿಚಯ ಇರಲಿಲ್ಲ. ಒಳ್ಳೆ ರಬ್ಬರ್ ತರ ಜೀಕುವ ಉಂಬಳ ಕಾಲು ತುಂಬಾ ಅಂಟಿಕೊಂಡವು, ಎರಡು ಕಿಲೋಮೀಟರ್ ಸಾಗಿದಾಗ ಭೋರ್ಗರೆತದ ಧ್ವನಿ ಕೇಳಿತು. ಅಲ್ಲೇ ಉಂಬಳಗಳನ್ನು ಬಡಿದು ಬಿಸಾಡಿ ನೀರಿಗೆ ಇಳಿದಾಗ ಸ್ವರ್ಗಸಾದೃಶ್ಯ ಜಲಧಾರೆ, ಉಂಬಳಗಳಿಗೆ ಮಾಡಿದ ರಕ್ತದಾನ ಮರೆತು ಹೋಗುವಷ್ಟು ಸೌಂದರ್ಯ. ಈಗ ನಾವೇ ವರ್ಡ್ಸ್ ವರ್ತ್ ಮತ್ತು ನಾವೇ ಲೀಚ್ ಗ್ಯಾದರರ್…
_20160725_123655.jpg
TEAM MALNAD TOURISM (MT ), PLACE-YADUR
Advertisements

2 thoughts on “Leech-gatherers in Yadur ಉಂಬಳದ ಕಾಡಲ್ಲಿ ರಕ್ತದಾನ”

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s