Hidden beauty Of Western Ghats : KAVALEDURGA

ಕವಲೇದುರ್ಗ
ಕವಲೇದುರ್ಗ ಚಾರಣ ಮಳೆಗಾಲದಲ್ಲಿ ಮನಮೋಹಕ
ಶಿವಮೊಗ್ಗ: ಪಶ್ಚಿಮಘಟ್ಟ ಶ್ರೇಣಿಗಳಲ್ಲಿ ಸ್ವರ್ಗಸಾದೃಶ್ಯ ಸ್ಥಳಗಳಿವೆ. ಅವುಗಳಲ್ಲಿ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಕವಲೇದುರ್ಗ ಕೂಡ ಸೇರಿದೆ. ಬೇರೆಲ್ಲಾ ಕಾಲದಲ್ಲಿ ಚಾರಣ ಮಾಡುವುದಕ್ಕೂ ಮಳೆಗಾಲದಲ್ಲಿ ಚಾರಣ ಮಾಡುವುದಕ್ಕೂ ತುಂಬಾ ವ್ಯತ್ಯಾಸವಿದೆ. ಮುಂಗಾರು ಮಳೆಯಿಂದ ಹಿಂಗಾರಿನವರೆಗೂ ಇಬ್ಬನಿ ರೀತಿಯಲ್ಲಿ ಮಳೆಯಿಂದ ಆವೃತವಾಗಿರುವ ಈ ಬೆಟ್ಟವನ್ನು ದಣಿವಾಗದಂತೆ ಏರಬಹುದು. ಚಾರಣಿಗರ ರೀತಿಯಲ್ಲೇ ಬಟ್ಟೆ ಹಾಕಿಕೊಂಡು ಬಂದರೆ ಮಳೆಗಾಲದಲ್ಲಿ ಉತ್ತಮ. ಶೂಗಳು ಕೂಡ ಹಾವಸೆಯ ಕಲ್ಲಿನ ಮೇಲೆ ಜಾರುತ್ತಿರುತ್ತವೆ. ಬೆಟ್ಟವನ್ನೇರುವ ಮುನ್ನ ಅದರ ತಪ್ಪಲಿನಲ್ಲಿ ವಾಹನಗಳನ್ನು ಪಾರ್ಕ್ ಮಾಡಲು ವ್ಯವಸ್ಥೆ ಇದೆ. ಅಲ್ಲಿಂದ ಗದ್ದೆ ಬಳಸಿ ಕೋಟೆ ಇರುವ ಬೆಟ್ಟಕ್ಕೆ ಕಾಲಿಡಬೇಕು.
DSCN2174 (2)
ನಿಧಾನವಾಗಿ ಕೋಟೆಯನ್ನು ಏರುತ್ತಾ ಹೋದರೆ, ಎಷ್ಟೋ ವೈವಿಧ್ಯಮಯ ಕಲಾಕೃತಿಗಳು ಕಾಣುತ್ತವೆ. ಗತ ಕಾಲದ ಕೋಟೆ ಕಣ್ಮುಂದೆ ಬರುತ್ತೆ. ಬೆಟ್ಟ ಏರಿದ ಹಾಗೆ ಸುತ್ತಲಿನ ಕಾಡು ಕ್ಷೀಣಿಸುತ್ತಾ ಹೋಗುತ್ತದೆ. ಅದರೊಂದಿಗೆ ಆದ್ರತೆ, ಹಿತವಾದ ಚಳಿ ಆವರಿಸುತ್ತೆ. ಪ್ರತಿ ಸುತ್ತನ್ನು ಏರಿದಾಗಲೂ ಹೊಸ ಬೆಟ್ಟ ಎದುರಾಗುತ್ತದೆ. ಪರ್ವತದ ತುದಿಯಲ್ಲಿ ಶಿಖರೇಶ್ವರ ದೇವಸ್ಥಾನವಿದೆ. ಇಲ್ಲಿಗೆ ಬಂದ ಪ್ರವಾಸಿಗರು ಸುಸ್ತಾಗಿ ವಾಪಸ್ ಆಗುವವರೂ ಇದ್ದಾರೆ. ಅದರ ಎದುರುಗಡೆ ದಟ್ಟವಾದ ಕಡಿದಾದ ಶಿಲೆ ಮೇಲೆ ಚಿಕ್ಕ ದೇಗುಲ ಹಾಗೂ ವಿಗ್ರಹವಿದೆ. ಅಲ್ಲಿಂದ ಸುತ್ತ ಕಣ್ಣಾಡಿಸಿದರೆ ಪ್ರಕೃತಿ ಸೌಂದರ್ಯಕ್ಕೆ ಎಣೆಯೇ ಇಲ್ಲ ಎಂಬಂತೆ ಭಾಸವಾಗುತ್ತದೆ. ಆ ಪ್ರದೇಶದಿಂದ ಮೇಲೆ ಇನ್ನೂ ಎತ್ತರದ ಗೋಪುರ, ಅದರ ಪಾದದಲ್ಲಿ ಮಳೆಗಾಲದಲ್ಲಿ ಮಾತ್ರ ಶಬ್ಧ ಮಾಡುತ್ತಾ ಹರಿಯುವ ಚಿಕ್ಕ ಕೆರೆ ಇದೆ. ಈ ಕೆರೆ ಸುತ್ತಲಿನ ಹಸಿರಿಗೆ ಅದೇ ಬಣ್ಣದಲ್ಲಿ ಕಂಗೊಳಿಸುತ್ತಿರುತ್ತೆ.
DSCN2200 (2)
ಪ್ರತೀತಿ
ದುರ್ಗ ಎಂದರೆ ಕೋಟೆ ಹಾಗೆಯೇ ಕವಲು ದುರ್ಗ ಎಂಬುದು ಈಗ ಕವಲೇದುರ್ಗ ಎಂದಾಗಿದೆ. ಏಳು ಸುತ್ತಿನ ಕೋಟೆ ಎಂದು ಸ್ಥಳೀಯರು ಹೇಳುತ್ತಾರೆ. ನೋಡಲೂ ಕೂಡ ಅದು ಏಳು ಸುತ್ತುಗಳಿಂದ ತುದಿ ತಲುಪುವಂತೆಯೇ ಇದೆ. ಕೆಳದಿ ಅರಸರು ಏಳರ ಸಂಖ್ಯೆಯ ಮೇಲಿನ ಮಮಕಾರದ ಪ್ರತೀಕವಾಗಿ ಏಳು ಹೆಡೆ ನಾಗರ ಕಲ್ಲು ಅರ್ಧ ಕೋಟೆ ಹತ್ತುವಾಗ ಬಲಕ್ಕೆ ಸ್ಥಾಪನೆಯಾಗಿದೆ. ಸುತ್ತಲೂ ಏಳು ಕೆರೆಗಳಿವೆ. ಕೋಟೆ ಏಳು ಸುತ್ತುಗಳನ್ನು ಹೊಂದಿದೆ.
ಕವಲೇದುರ್ಗಕ್ಕೆ ಮಾರ್ಗ..
ರಾಜ್ಯದ ಯಾವ ಕಡೆಯಿಂದಾದರೂ ತೀರ್ಥಹಳ್ಳಿಗೆ ಬಂದರೆ ಅಲ್ಲಿಂದ 30 ಕಿಲೋಮೀಟರ್ ಅಂತರದಲ್ಲಿ ಕವಲೇದುರ್ಗ ಸಿಗುತ್ತೆ. ಹೊಸನಗರದ ಕಡೆಯಿಂದ ಬರುವವರು ನಗರದಿಂದ ಚಕ್ರಾ ಮಾರ್ಗವಾಗಿ ಹಾಗೂ ಹುಲಿಕಲ್ ಮಾರ್ಗವಾಗಿ ಬರಬಹುದು. ದಕ್ಷಿಣ ಕನ್ನಡ ಜಿಲ್ಲೆಯಿಂದ ಬರುವವರು ಆಗುಂಬೆ ಬಳಸಿ ಮುಳುಬಾಗಿಲು ( ತೀರ್ಥಹಳ್ಳಿಯಿಂದ ಹಿಂದೆ ) ಎಡಕ್ಕೆ ತಿರುಗಿದರೆ ಕವಲೇದುರ್ಗ ಸಿಗುತ್ತದೆ.DSCN2224 (2)DSCN2291 (2)DSCN2385 (2)
Advertisements

2 thoughts on “Hidden beauty Of Western Ghats : KAVALEDURGA

  1. Dear Friends
    Good Topics also resourced with Good Subject.
    All the best Let this website became one of Resourceful webpage of our Malenadu Region &one of favorite visit spot of netizence..
    With Regards
    @SridharDPS

    Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s